ರಾಜ್ಯದಲ್ಲಿ ಮುಂದಿನ 7 ದಿನಗಳ ಕಾಲ ಧಾರಾಕಾರ ಮಳೆ: 5 ಜಿಲ್ಲೆಗಳಿಗೆ 'ರೆಡ್ ಅಲರ್ಟ್' ಘೋಷಿಸಿದ ಹವಾಮಾನ ಇಲಾಖೆ
ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ 7 ದಿನಗಳ ಕಾಲ ಭಾರಿ ಮಳೆ ಸಂಭವನೀಯತೆ ಇದ್ದ ಕಾರಣ ಬುಧವಾರದಂದು 5 ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ ಘೋಷಿಸಿದ ಹವಾಮಾನ ಇಲಾಖೆ.
ಬೆಂಗಳೂರು: ರಾಜ್ಯದ ಕರಾವಳಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಏಳು ದಿನಗಳ ಕಾಲ ಭಾರಿ ‘ಮಳೆ’ ಹಾಗೂ ಗಾಳಿ ‘45 ರಿಂದ 50’ ಕಿ.ಮೀ. ಬೀಸಲಿದೆ ಆದಕಾರಣ 5 ಜಿಲ್ಲೆಗಳಿಗೆ “ರೆಡ್ ಅಲರ್ಟ್” ಘೋಷಿಸಿದ ಹವಾಮಾನ ಇಲಾಖೆ.
ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಂಗಳೂರು, ಉಡುಪಿ, ಹಾಗೂ ಶಿವಮೊಗ್ಗದಲ್ಲಿ ಧಾರಾಕಾರ ಮಳೆಯಾಗುತ್ತದೆ. ಎಂದು ಹವಾಮಾನ ಇಲಾಖೆಯು ಘೋಷಿಸುವ ಮೂಲಕ “ರೆಡ್ ಅಲರ್ಟ್” ಅನ್ನು ಐದು ಜಿಲ್ಲೆಗಳಿಗೆ ಘೋಷಿಸಲಾಗಿದೆ. ಉತ್ತರ ಕನ್ನಡ ಮತ್ತು ಹಾಸನ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಿಸಿದ್ದಾರೆ. ಮತ್ತು ಬೆಳಗಾವಿ ಹಾಗೂ ಮೈಸೂರು ಜಿಲ್ಲೆಗಳಿಗೆ ‘ಯಲ್ಲೊ ಅಲರ್ಟ್’ ಘೋಷಿಸುವ ಮೂಲಕ ಬೆಳಗಾವಿ ಹಾಗೂ ಮೈಸೂರ್ ಜಿಲ್ಲೆಗಳಲ್ಲಿ 40 ರಿಂದ 50 ಕಿ.ಮೀ. ರೆಸ್ಟು ವೇಗವಾಗಿ ಗಾಳಿಯು ಸಹಿತ ಸಾಧಾರಣ ಮಳೆಯಾಗುವ ಸಂಭವನೀಯತೆ ಇದೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ. ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ, ಒಳನಾಡು ಪ್ರದೇಶಗಳನ್ನು ಸೇರಿದಂತೆ ಸ್ವಲ್ಪಮಟ್ಟಿಗೆ ಗಾಳಿ ಮಳೆ ಆಗುವ ಸಂಭವನೀಯತೆ ಅಥವಾ ಸಾಧ್ಯತೆ ಇವೆ ಎಂದು ಅವಮಾನ ಇಲಾಖೆ ವರದಿಯನ್ನು ನೀಡಿದೆ.
ಹಾಗೆಯೇ ಕರಾವಳಿ ಪ್ರದೇಶದಲ್ಲಿ ಬಿರುಗಾಳಿಯ ಸಹಿತ ಗಾಳಿ ಮಳೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಮೀನುಗಾರರು ಯಾವುದೇ ಕಾರಣಕ್ಕೂ ಮೀನು ಹಿಡಿಯಲು ಹೋಗಬಾರದೆಂದು, ಹವಾಮಾನ ಇಲಾಖೆ ನಿನ್ನನ್ನು ಹಿಡಿಯುವ ಮೀನುಗಾರರಿಗೆ ಯೋಚನೆಯನ್ನು ನೀಡಿದೆ. ಆದ್ದರಿಂದಾಗಿ ಕರಾವಳಿ ಪ್ರದೇಶದಲ್ಲಿರುವ ಜನರು ಬಿರುಗಾಳಿಯ ಸಹಿತ ಮಳೆ ಇದ್ದ ಕಾರಣ ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾಗಿದೆ ಎಂದು ಹವಾಮಾನ ಇಲಾಖೆಯು ಸೂಚನೆಯನ್ನು ನೀಡಿದೆ.
ಅದೇ ರೀತಿಯಾಗಿ ಕರಾವಳಿಯ ಎರಡು ಜಿಲ್ಲೆಗಳಲ್ಲಿ ಭಾರಿ ಮಳೆ ಆಗುವ ಸಾಧ್ಯತೆಯಿಂದಾಗಿ ಈ ಎರಡು ಜಿಲ್ಲೆಗಳನ್ನು ಸೇರಿದಂತೆ ಸುಮಾರು ಐದು ಜಿಲ್ಲೆಗಳಿಗೆ “ಆರೆಂಜ್ ಅಲರ್ಟ್” ಘೋಷಿಸಲಾಗಿದೆ ಹಾಗೂ ಬೆಳಗಾವಿ ಜಿಲ್ಲೆಗೆ “ಯಲ್ಲೊ ಅಲರ್ಟ್” ಘೋಷಿಸಲಾಗಿದೆ.