Martin Trailer Review : ಧ್ರುವ ಸರ್ಜಾ ಅವರ ಮಾರ್ಟಿನ್ ಚಿತ್ರದ ಟ್ರೈಲರ್ ಗೆ ಜನರಿಂದ ಸಿಕ್ಕ ಪ್ರತಿಕ್ರಿಯೆ

ಧ್ರುವ ಸರ್ಜಾ ಅವರ ಮಾರ್ಟಿನ್ (Martin Trailer Review) ಚಿತ್ರದ ಟ್ರೈಲರ್ ಹೇಗಿತ್ತು

Martin Trailer Review

ಧ್ರುವ ಸರ್ಜಾ ಅಭಿಮಾನಿ ಬಳಗದವರು ಎರಡು ಮೂರು ವರ್ಷಗಳಿಂದ ಕಾಯುತ್ತಿರುವ, ಮತ್ತು ಧ್ರುವ ಸರ್ಜಾ (Martin Trailer Review) ರವರ ಅತ್ಯಂತ ನಿರೀಕ್ಷಿತ ಸಿನಿಮಾ ಇದಾಗಿದ್ದು, ಅವರ ಅಭಿಮಾನಿಗಳು ಸುಮಾರು ಎರಡರಿಂದ ಮೂರು ವರ್ಷಗಳಿಂದ "ಮಾರ್ಟಿನ್" ಚಿತ್ರವು ಯಾವಾಗ ಬರುವುದು ಎಂಬ ಆಸೆಯನ್ನು ಇಟ್ಟುಕೊಂಡು ಹಲವಾರು ದಿನಗಳಿಂದ ಕಾಯುತ್ತಿದ್ದರು.

ಮಾರ್ಟಿನ್ ಚಿತ್ರತಂಡವು ಕೆಲವು ದಿನಗಳ ಮುಂಚಿತವಾಗಿ ತಮ್ಮದೇ ಆದಂತಹ ಒಂದು ವೆಬ್ಸೈಟ್ ಅನ್ನು ಸೃಷ್ಟಿಸಿ ಅದರಲ್ಲಿ ನಾಲ್ಕು ರೀತಿಯಾದ ಹಂತಗಳನ್ನು ಇಟ್ಟಿದ್ದರು.
 
  • ಮೊದಲನೆಯದ್ದು ಒಂದು ಪೋಸ್ಟರ್ ಆಗಿತ್ತು.
  • ಎರಡನೇದು ಚಿತ್ರದ ಮೊದಲನೆಯ ಹಾಡಾಗಿತ್ತು. 
  • ಮೂರನೆಯದು ಚಿತ್ರದ ಟ್ರೈಲರ್ 1 ಆಗಿತ್ತು.
  • ನಾಲ್ಕನೆಯದು ಚಿತ್ರದ ಒಂದು ಸಣ್ಣ ತುಂಡು ಬಿಡುವುದಾಗಿತ್ತು. 
ಇದರಲ್ಲಿ 30 ಲಕ್ಷ ಜನರು ಮೂರನೆಯ ಹಂತವಾದ ಟ್ರೈಲರ್ 1 ಆಯ್ಕೆ ಮಾಡಿಕೊಂಡಿದ್ದರು. ಆದ್ದರಿಂದಾಗಿ ಚಿತ್ರತಂಡವು ಮಾರ್ಟಿನ್ ಟ್ರೈಲರ್ ಅನ್ನು ಬಿಡುವುದು ಎಂಬ ಭರವಸೆಯನ್ನು ನೀಡಿದ್ದರು. 

ಧ್ರುವ ಸರ್ಜಾ ರವರ ಮಾರ್ಟಿನ ಚಿತ್ರದ ಟ್ರೈಲರ್ ಗೆ ಜನರಿಂದ ಸಿಕ್ಕ ಪ್ರತಿಕ್ರಿಯೆ ಹೇಗಿತ್ತು

ಇವತ್ತಿನ ದಿನ 4/8/2024 ರಂದು ಕರ್ನಾಟಕದ ಕೆಲವೊಂದಿಷ್ಟು ಚಿತ್ರಮಂದಿರಗಳಲ್ಲಿ ಧ್ರುವ ಸರ್ಜಾ ರವರ ಅಭಿಮಾನಿಗಳಿಗೆ ಅನಿರೀಕ್ಷಿತವಾಗಿ ಚಿತ್ರತಂಡದಿಂದ ಕೆಲವೊಂದಿಷ್ಟು ಚಿತ್ರಮಂದಿರಗಳಲ್ಲಿ ಧ್ರುವ ಸರ್ಜಾ ರವರ ಮಾರ್ಟಿನ್ ಚಿತ್ರದ ಟ್ರೈಲರ್ ಒಂದನ್ನು ಬಿಡುಗಡೆ ಮಾಡಲಾಗಿತ್ತು.

Martin Trailer Review


ಆದ್ದರಿಂದಾಗಿ ಮಾರ್ಟಿನ್ ಚಿತ್ರದ ಟ್ರೈಲರ್ ಅನ್ನು ನೋಡಲು ಧ್ರುವ ಸರ್ಜಾ ಅವರ ಅಭಿಮಾನಿಗಳು ಚಿತ್ರಮಂದಿರಕ್ಕೆ ಹೋಗಿ ಮಾರ್ಟಿನ್ ಚಿತ್ರದ ಟ್ರೈಲರ್ ಒಂದನ್ನು ಕಣ್ತುಂಬಿಕೊಂಡು ಬಂದು ಅದು ಯಾವ ರೀತಿಯಾಗಿದೆ ಎಂಬುದನ್ನು ಹೇಳಿದ್ದಾರೆ. ಮಾರ್ಟಿನ್ ಚಿತ್ರದ ಟ್ರೈಲರ್ ಒಂದು ನೋಡಲು ಚೆನ್ನಾಗಿದೆ ಹಾಗೂ ನಮ್ಮ ಕರ್ನಾಟಕದ ಮಾರ್ಟಿನ್ ಸಿನಿಮಾ ಯಾವುದೇ ಹಾಲಿವುಡ್ ಸಿನಿಮಾಗಿಂತಲೂ ಕಡಿಮೆ ಇಲ್ಲ ಎಂಬ ಹೆಮ್ಮೆಯ ಮಾತನ್ನು ಆಡುತ್ತಾ ಅವರು ತಮ್ಮ ಮನೆಗಳಿಗೆ ಹೋದರು.

ಮಾರ್ಟಿನ್ ಚಿತ್ರದ ಟ್ರೈಲರ್ ಬಿಡುಗಡೆಯ ದಿನಾಂಕ

ಧ್ರುವ ಸರ್ಜಾ ಅವರು ಹಾಗೆ ಚಿತ್ರತಂಡದವರು ಮಾರ್ಟಿನ್ ಚಿತ್ರದ ಟ್ರೈಲರ್ ಒಂದನ್ನು ದಿನಾಂಕ 5/08/2024 ರಂದು ಮುಂಬೈಯಲ್ಲಿ ನಡೆಯುತ್ತಿರುವ ಒಂದು ದೊಡ್ಡ ಪ್ರೆಸ್ ಮೀಟ್ ಅಲ್ಲಿ ಚಿತ್ರತಂಡವು ಮಾರ್ಟಿನ್ ಚಿತ್ರದ ಟ್ರೈಲರ್ ಒಂದನ್ನು ಯೂಟ್ಯೂಬ್ ಜಾಲತಾಣದಲ್ಲಿ ಬಿಡುವುದಾಗಿ ಹೇಳಲಾಗಿದೆ. 



Post a Comment

Previous Post Next Post