WPL 2024, ಆರ್‌ಸಿಬಿ vs ಗುಜರಾತ್ ಜೈಂಟ್ಸ್ ಎರಡನೇ ಬಾರಿ ಮುಖಾಮುಖಿ

WPL 2024, ಆರ್‌ಸಿಬಿ vs ಗುಜರಾತ್ ಜೈಂಟ್ಸ್

WPL 2024 ನಲ್ಲಿ ಗುಜರಾತ ಜೈಂಟ್ಸ್ ಮತ್ತು ಆರ್‌ಸಿಬಿ ತಂಡಗಳು ಎರಡು ಗೆಲುವಿಗೆ ಆಡುತ್ತಿವೆ ಹಾಗೂ ಇಲ್ಲಿ ಯಾರು ಗದ್ದು ಪಂದ್ಯದಲ್ಲಿ ಉಳಿಯುತ್ತರೋ ಎಲ್ಲವೂ ಎಂಬುವದು ತಿಳಿದುಕೊಳ್ಳೋಣ

ಆರ್‌ಸಿಬಿ ಮತ್ತು ಗುಜರಾತ ಜೈಂಟ್ಸ್ WPL 2024 ನಲ್ಲಿ ಮುಖಾಮುಖಿಯಾದ ಪಂದ್ಯಗಳು

ಆರ್‌ಸಿಬಿ ಮತ್ತು ಗುಜರಾತ ಜೈಂಟ್ಸ್ ಎರಡು ಪಂದ್ಯಗಳಲ್ಲಿ ಆರ್‌ಸಿಬಿ ತಂಡವು ಮುಂದೆ ಇದೆ ಹಾಗೂ RCB ತಂಡವೂ ಗುಜರಾತ ಜೈಂಟ್ಸ್ ತಂಡವನ್ನು RCB ಯು ಎರಡು ಬಾರಿ ಸೋಲಿಸಿದೆ ಅದರಿಂದ ಇಲ್ಲಿ RCB ಈ ಪಂದ್ಯದಲ್ಲಿ ಮೇಲುಗೈ ಸಾಧಿಸಲಿದೆ. ಗುಜರಾತ ಜೈಂಟ್ಸ್ ಇಲ್ಲಿ ಸ್ವಲ್ಪ ಹಿಂದೆ ಸರಿದಿದೆ ಎಂಬಹುದು ಗುಜರಾತ್ ಜೈಂಟ್ಸ್ WPL 2024 ನಲ್ಲಿ ತಮ್ಮ ಗೆಲುವನ್ನು ಪಡೆದಿಲ್ಲಾ ಆದರಿಂದ ಗುಜರಾತ್ ಜೈಂಟ್ಸ್ ಪಡೆಯಲು ತುದಗಾಲಿನಲ್ಲಿ ನಿಂತಿದ್ದಾರೆ.

ವಿಮೆನ್ಸ್ ಪ್ರೀಮಿಯರ್ ಲೀಗ್ (WPL) 2024ರ 13ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೈಂಟ್ಸ್ ತಂಡಗಳು (Gujarat Giants vs Royal Challengers Bangalore Women) ಮುಖಾಮುಖಿಯಾಗತ್ತಿವೆ. ಪ್ರಸಕ್ತ ಟೂರ್ನಿಯಲ್ಲಿ ಇದು ಉಭಯ ತಂಡಗಳ ನಡುವಿನ ಎರಡನೇ ಮುಖಾಮುಖಿಯಾಗಿದ್ದು, ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಮೊದಲ ಬಾರಿಗೆ ತಂಡಗಳು ಅದೃಷ್ಟ ಪರೀಕ್ಷೆಗೆ ಇಳಿದಿವೆ. ಮಾರ್ಚ್ 6ರ ಬುಧವಾರ ನಡೆಯುತ್ತಿರುವ ಪಂದ್ಯದಲ್ಲಿ, ಗೆದ್ದು ಟೂರ್ನಿಯಲ್ಲಿ ಜೀವಂತವಾಗಿ ಉಳಿಯಲು ಸ್ಮೃತಿ ಮಂಧಾನ ಹಾಗೂ ಬೆತ್‌ ಮೂಡನಿ ಪಡೆಗಳು ಎದುರು ನೋಡುತ್ತಿವೆ.

ಮೈದಾನದ ವರದಿ

ದೆಹಲಿಯ ಅರುಣ್‌ ಜೇಟ್ಲಿ ಮೈದಾನದ ಪಿಚ್‌ ಬ್ಯಾಟರ್‌ಗಳಿಗೆ ಹೆಚ್ಚು ನೆರವಾಗಲಿದೆ. ಡೆಲ್ಲಿ ಮತ್ತು ಮುಂಬೈ ನಡುವಿನ ಮೊದಲ ಪಂದ್ಯದಲ್ಲೂ ಕ್ಯಾಪಿಟಲ್ಸ್‌ ತಂಡ ಸ್ಫೋಟಕ ಬ್ಯಾಟಿಂಗ್‌ ನಡೆಸಿತು. ಟಾಸ್‌ ಗೆದ್ದ ಮುಂಬೈ ತಂಡ ಚೇಸಿಂಗ್‌ ಆಯ್ಕೆ ಮಾಡಿಕೊಂಡರೂ, ಚೇಸಿಂಗ್‌ಗೆ ಪಿಚ್‌ ನೆರವಾಗಲಿಲ್ಲ. ಪಿಚ್‌ನಲ್ಲಿ ಮಂಜಿನ ಪಾತ್ರ ಪ್ರಮುಖವಾಗಲಿಲ್ಲ. ಈ ಕುರಿತು ಪಂದ್ಯದ ಬಳಿಕ ಮುಂಬೈ ನಾಯಕಿ ಕೌರ್‌ ಕೂಡಾ ಹೇಳಿಕೊಂಡಿದ್ದಾರೆ. ಹೀಗಾಗಿ ದೆಹಲಿಯಲ್ಲಿ ಮೊದಲು ಬ್ಯಾಟಿಂಗ್‌ ನಡೆಸುವ ತಂಡಗಳಿಗೆ ಜಾಸ್ತಿ ಅನುಕೂಲವಾಗುವ ಸಾಧ್ಯತೆ ಇದೆ. ಮೈದಾನದಲ್ಲಿ ವೇಗಗಳಿಗಿಂತ ಸ್ಪಿನ್ನರ್‌ಗಳು ಮೇಲುಗೈ ಸಾಧಿಸುವ ಸಾಧ್ಯತೆ ಹೆಚ್ಚು.

WPL 2024 ನಲ್ಲಿ ಆರ್‌ಸಿಬಿ ತಂಡದ ಆಟಗಾರರು


ಸ್ಮೃತಿ ಮಂದನಾ, ಸೋಫಿಯಾ ದೇವಿನೆ, ಸಬ್ಭಿನೇನಿ ಮೇಘನಾ, ಎಲ್ಲಿಸೆ ಪೆರಿ, ರಿಚಾ ಘೋಷ, ಶೋಪೀ ಮೊಳಿಮಿಕ್ಸ್, ಜಾರ್ಜಿಯಾ ವೆರಹಮ್, ಶ್ರೇಯಾಂಕ ಪಾಟೀಲ, ಸಿಮ್ರಣ ಬಹದ್ದೂರ್, ಶೋಭನ ಆಶಾ, ರೇಣುಕಾ ಠಾಕೂರ್ ಸಿಂಘ, ಕೇಟೆ ಕ್ರಾಸ್, ದೋಷ ಕಸತ್, ನಡಿನೆ ದೆ ಕ್ಲರೆಕ್, ಏಕ್ತಾ ಬಿಷ್ಟ್, ಇಂದ್ರಾಣಿ ರಾಯ್, ಶುಭಾ ಸತೀಶ, ಶ್ರದ್ಧಾ ಪೋಖರ್ಕರ್.

WPL 2024 ನಲ್ಲಿ ಗುಜರಾತ್ ಜೈಂಟ್ಸ್ ತಂಡದ ಆಟಗಾರರು

ಲಾರಾ ವೊಲ್ವಾರ್ಡ್, ಬೆತ್ ಮೂನಿ (ನಾಯಕಿ ಮತ್ತು ವಿಕೆಟ್‌ ಕೀಪರ್), ಫೋಬ್ ಲಿಚ್‌ಫೀಲ್ಡ್, ಆಶ್ಲೀ ಗಾರ್ಡ್ನರ್, ವೇದಾ ಕೃಷ್ಣಮೂರ್ತಿ, ದಯಾಲನ್ ಹೇಮಲತಾ, ಕ್ಯಾಥರಿನ್ ಬ್ರೈಸ್, ತನುಜಾ ಕನ್ವರ್, ತರನ್ನುಮ್ ಪಠಾಣ್, ಮೇಘನಾ ಸಿಂಗ್, ಮನ್ನತ್ ಕಶ್ಯಪ್.

Post a Comment

Previous Post Next Post