ಮಾಘ ಮಾಸದ ಶುಕ್ಲ ಪಕ್ಷದ ಏಕಾದಶಿ ದಿನವನ್ನು ಜಯ ಏಕಾದಶಿ ಎಂದು ಕರೆಯಲಾಗುತ್ತದೆ. ಈ ವರ್ಷ ಜಯ ಏಕಾದಶಿಯನ್ನು ಫೆಬ್ರವರಿ 20 ರಂದು ಮಂಗಳವಾರ ಆಚರಿಸಲಾಗುತ್ತದೆ. ಈ ದಿನದಂದು, ವಿಷ್ಣುವನ್ನು ಪೂಜಿಸಲಾಗುತ್ತದೆ ಮತ್ತು ಉಪವಾಸವನ್ನು ಆಚರಿಸಲಾಗುತ್ತದೆ ಮತ್ತು ವ್ಯಕ್ತಿಯು ಪ್ರೇತಾತ್ಮಗಳ ಕಾಟದಿಂದ ಮುಕ್ತನಾಗುತ್ತಾನೆ ಎಂದು ನಂಬಲಾಗಿದೆ.
ವರ್ಷದಲ್ಲಿ ಬರುವ ಎಲ್ಲಾ ಏಕಾದಶಿಗಳಲ್ಲಿ, ಜಯ ಏಕಾದಶಿಯನ್ನು ವಿಶೇಷ ಮಹತ್ವವೆಂದು ಪರಿಗಣಿಸಲಾಗಿದೆ. ಈ ದಿನವನ್ನು ಆಚರಣೆ ಮಾಡುವುದರಿಂದ ಎಲ್ಲಾ ರೀತಿಯ ಪಾಪಗಳು ನಿವಾರಣೆಯಾಗಿ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ. ಈ ದಿನ, ವಿಷ್ಣುವನ್ನು ಭಕ್ತಿಯಿಂದ ಪೂಜಿಸುವ ಮೂಲಕ ವಿವಿಧ ರೀತಿಯ ಆಚರಣೆಗಳನ್ನು ಪಾಲನೆ ಮಾಡಲಾಗುತ್ತದೆ. ಇನ್ನು ಈ ಬಾರಿ ಜಯ ಏಕಾದಶಿಯು ಫೆ. 20 ರಂದು ಆಚರಣೆ ಮಾಡಲಾಗುತ್ತಿದೆ. ಇನ್ನು ಈ ಏಕಾದಶಿಯ ಬಗ್ಗೆ ಧರ್ಮಗ್ರಂಥಗಳಲ್ಲಿಯೂ ಕೂಡ ವರ್ಣಿಸಲಾಗಿದ್ದು, ಅರಿಯದೆಯೇ ಮಾಡಿದ ತಪ್ಪುಗಳಿಗೂ ಪರಿಹಾರ ಸಿಗುತ್ತದೆ ಎನ್ನಲಾಗುತ್ತದೆ.
ಈ ಏಕಾದಶಿ ಉಪವಾಸವನ್ನು ಆಚರಿಸುವ ಮೂಲಕ, ವ್ಯಕ್ತಿಯು ಪ್ರೇತಾತ್ಮಗಳ ಕಾಟದಿಂದ ಮುಕ್ತನಾಗುತ್ತಾನೆ ಎಂದು ನಂಬಲಾಗಿದೆ. ಅಲ್ಲದೆ ಈ ವ್ರತವನ್ನು ಭಕ್ತಿಯಿಂದ ಆಚರಿಸುವ ವ್ಯಕ್ತಿಯು ಬ್ರಾಹ್ಮಣ ಹತ್ಯಾ ಪಾಪದಿಂದಲೂ ಮುಕ್ತನಾಗಬಹುದು ಎಂದು ಹೇಳಲಾಗುತ್ತದೆ.
ಹಿಂದೂ ಕ್ಯಾಲೆಂಡರ್ ಪ್ರಕಾರ, ಪ್ರತಿ ವರ್ಷ ಜಯ ಏಕಾದಶಿ ಉಪವಾಸವನ್ನು ಮಾಘ ತಿಂಗಳ ಶುಕ್ಲ ಪಕ್ಷದ ಏಕಾದಶಿ ದಿನದಂದು ಆಚರಿಸಲಾಗುತ್ತದೆ. ಈ ಏಕಾದಶಿಯಂದು ಉಪವಾಸ ಮಾಡುವ ಮೂಲಕ, ವಿಷ್ಣುವಿನ ಕೃಪೆಯಿಂದ ಜೀವನದಲ್ಲಿ ಎಲ್ಲಾ ರೀತಿಯ ಸಂತೋಷವನ್ನು ಪಡೆಯುತ್ತಾರೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಈ ದಿನದಂದು ಪೂಜೆಯ ಜೊತೆಗೆ, ಕೆಲವು ಪರಿಹಾರಗಳನ್ನು ವಿಶೇಷವಾಗಿ ಫಲಪ್ರದವೆಂದು ಪರಿಗಣಿಸಲಾಗುತ್ತದೆ. ಜಯ ಏಕಾದಶಿ ದಿನದಂದು ಈ ಕ್ರಮಗಳನ್ನು ಅಳವಡಿಸಿಕೊಳ್ಳುವುದರಿಂದ ಉದ್ಯೋಗದಲ್ಲಿ ಬಡ್ತಿ ಮತ್ತು ತೊಂದರೆಗಳಿಂದ ಪರಿಹಾರ ಸಿಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಈ ಕ್ರಮಗಳ ಬಗ್ಗೆ ತಿಳಿದುಕೊಳ್ಳೋಣ.
ಇದನ್ನೂ ಓದಿ: ವೃಂದಾವನದ ನಿಧಿವನಕ್ಕೆ ಸಂಜೆಯ ನಂತರ ಪ್ರವೇಶ ನಿಷೇಧಿಸಿರುವುದೇಕೆ? ಇಲ್ಲಿದೆ ರಹಸ್ಯ ಮಾಹಿತಿ
ಜಯ ಏಕಾದಶಿ ದಿನದಂದು, ವಿಷ್ಣುವಿನೊಂದಿಗೆ ಲಕ್ಷ್ಮೀ ದೇವಿಯನ್ನು ಪೂಜಿಸಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಹಣದ ಕೊರತೆ ಬರುವುದಿಲ್ಲ ಜೊತೆಗೆ ಕೆಲಸದ ಸ್ಥಳದಲ್ಲಿ ಪ್ರಗತಿ ಇರುತ್ತದೆ.
-ಜಯ ಏಕಾದಶಿಯಂದು ವಿಷ್ಣುವನ್ನು ಮೆಚ್ಚಿಸಲು, ಅವನಿಗೆ ಹಳದಿ ಬಣ್ಣದ ಬಟ್ಟೆಗಳು, ಹೂವುಗಳು, ಹೂವಿನ ಹಾರ ಮತ್ತು ಹಣ್ಣುಗಳನ್ನು ಅರ್ಪಿಸಿ.
-ಈ ದಿನದಂದು ಹಸುವಿಗೆ ಮೇವು ನೀಡುವುದು ಬಹಳ ಫಲಪ್ರದವೆಂದು ಪರಿಗಣಿಸಲಾಗಿದೆ.
-ಭಗವಾನ್ ವಿಷ್ಣು ಅರಳಿ ಮರದಲ್ಲಿ ವಾಸಿಸುತ್ತಾನೆ ಎಂಬ ಧಾರ್ಮಿಕ ನಂಬಿಕೆ ಇದೆ. ಹಾಗಾಗಿ ಈ ಏಕಾದಶಿ ದಿನದಂದು, ಅರಳಿ ಮರವನ್ನು ಪೂಜಿಸಿ, ಅದಕ್ಕೆ ನೀರನ್ನು ಅರ್ಪಿಸಿ ಬಳಿಕ ತುಪ್ಪದ ದೀಪವನ್ನು ಬೆಳಗಿಸಿ. ಈ ದಿನ ಹೀಗೆ ಮಾಡುವುದರಿಂದ ಎಲ್ಲಾ ನಿಮ್ಮ ಸುಪ್ತ ಆಸೆಗಳು ಈಡೇರುತ್ತವೆ.
ಜಯ ಏಕಾದಶಿ ದಿನದಂದು, ತುಳಸಿ ಎಲೆಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಮನೆಯಲ್ಲಿ ಸುರಕ್ಷಿತವಾಗಿ ಇರಿಸಿ ಮತ್ತು ನಂತರ ಏಕಾದಶಿ ಪೂಜೆಯ ನಂತರ, ಆ ಎಲೆಗಳನ್ನು ಲಕ್ಷ್ಮೀ ದೇವಿ ಮತ್ತು ವಿಷ್ಣುವಿನ ಪಾದಗಳಿಗೆ ಅರ್ಪಿಸಿ. ಇದರ ನಂತರ, ಈ ತುಳಸಿ ಎಲೆಗಳೊಂದಿಗೆ ಒಂದು ರೂಪಾಯಿ ನಾಣ್ಯವನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಅದನ್ನು ನಿಮ್ಮ ಪರ್ಸ್ ನಲ್ಲಿ ಇರಿಸಿ. ಇದು ಆರ್ಥಿಕ ಲಾಭವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.
ಜಯ ಏಕಾದಶಿಯಂದು ಈ ಮಂತ್ರಗಳನ್ನು ಪಠಿಸಿ;
-ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ
ವಿಶ್ವಾಧಾರಂ ಗಗನ ಸದೃಶಂ ಮೇಘವರ್ಣಂ ಶುಭಾಂಗಂ
ಲಕ್ಷ್ಮೀಕಾಂತಂ ಕಮಲನಯನಂ ಯೋಗಿಬಿರ್ಧ್ಯಾನಗಮಯಂ
ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಂ
-ಓಂ ನಮೋ ನಾರಾಯಣಾಯ
-ಓಂ ನಮೋ ಭಗವತೇ ವಾಸುದೇವಾಯ ಎಂಬ ಮಂತ್ರವನ್ನು ಜಪಿಸಬೇಕು. ಜಯ ಏಕಾದಶಿ ದಿನದಂದು ವಿಷ್ಣುವಿನ ಮಂತ್ರಗಳನ್ನು ಪಠಿಸುವುದು ಶುಭ ಫಲಿತಾಂಶಗಲು ಪ್ರಾಪ್ತಿಯಾಗುತ್ತದೆ.